ಸ್ತ್ರೀ ಶಕ್ತಿ

By Lakshmi Satyanarayana

ನನ್ನ ಈ ಲೋಕದ ಪಯನಕ್ಕೆ ಸಾರಥಿ ನೀನಮ್ಮ
ನಿನ್ನ ಮನದ ಆಗಸಕ್ಕೆ ಧೃವತಾರೆ ನಾನಮ್ಮ
ನಿನ್ನ ಪ್ರೇಮದ ಚಿಲುಮೆಯಲಿ ಧ್ಯಾನಿಸಿದವನು ನಾನು
ಸ್ವಾತಿ ಮುತ್ತಾಗಿ ನನ್ನ ನಿನ್ನ ಕವಚದಲ್ಲಿ ಕಾಯುವೆ ನೀನು

ನವಮಾಸ ಗರ್ಭದ ಗುಡಿಯಲಿ ನಿನ್ನ ಪೂಜಿಸಿದೇ
ನಿನ್ನ ಒಡಲ ಕಡಲಲ್ಲಿ ಸಾಗುತ ಈ ಭೂಮಿಗೆ ಬಂದೆ
ನನ್ನ 'ತೊದಲ' ನುಡಿಯ ಮೊದಲ ಪದ ನೀ
ಈ ಜೀವಕ್ಕೆ ನಿನ್ನ ಪ್ರೇಮವೇ ಸಂಜೀವಿನಿ
ನೀನೇ ನನ್ನ ಬದುಕಿನ 'ಬ್ರಹ್ಮ'

ಆ ನಿನ್ನ ನಗು ಮೊಗದ ಛಾಯೆ
ನಾ ಅರಿಯೇ ಅದರ ಸೋಜಿಗದ ಮಾಯೆ
ಜಗದ ಜನ ನಿನ್ನ 'ವರ'
ನೀನೆ ಎಂದೆಂದಿಗೂ ಅಜಾರ'ಮರ
ಅಮ್ಮ ನಿನ್ನ ನಾಮವೇ ಲೋಕದ ಸಂಭ್ರಮ

ಜಗದ ಮೊದಲ ಜೋಕಾಲಿ ನಿನ್ನ ಮಡಿಲಲ್ಲಿ
ಯುಗದ ಚೊಚ್ಚಲ ಲಾಲಿ ನಿನ್ನ ಒಡಲಲ್ಲಿ

ಸಹನೆಯೆಂಬ ಶಿಖರ ಹೊತ್ತೆ ಭೂತಾಯಿಯಾಗಿ
ಕರುಣೆಯೆಂಬ ಬೀಜವ ಭಿತ್ತೆ ಹೆತ್ತತಾಯಿಯಾಗಿ
ಅಕ್ಕರೆಯ ಅಕ್ಕನಾಗಿ ಮಮತೆಯ ತಂಗಿಯಾಗಿ
ಪ್ರತಿ ಮನೆಮನಗಳ ಬೆಳಗುವೆ ತವರಿನ ಸಿರಿಯಾಗಿ

ಜೀವನವೆಂಬ ಕಡಲಲ್ಲಿ ನೀ ಗೆಳತಿಯೆಂಬ ದೋಣಿಯಾದೆ
ಪತಿಯ ಮನದ ಅಂಗಳದಲ್ಲಿ  ಸತಿಯೆಂಬ ರಂಗವಲ್ಲಿಯಾದೆ
ಹೆತ್ತವರ ಆರೈಕೆಯ ದೇಗುಲದಲ್ಲಿ  ಮಗಳೆಂಬ ಮೂರ್ತಿಯಾದೆ
ಪ್ರತಿಯೊಬ್ಬರ ಬದುಕಲ್ಲಿ ನೀ ಚಿಲುಮೆಯ ಸ್ಪೂರ್ತಿಯಾದೆ


Leave a comment