By Alwin Pavan G.
ಸಿಂಧೂರ ಕನ್ನಡಿ.
ಇಟ್ಟರೆನಗೆ ಸಿಂಧೂರ ನಾ ಅರಿಯದಂತೆ ,
ಕರೆದರೆನ್ನ ಸಿಂಧೂರಗನ್ನಡಿ ನಾ ತಿಳಿಯದಂತೆ.
ಹಂಬಲಿಸುತ್ತಿದ್ದೇ ನಾ ಕಾಣಲೆನ್ನ ಬಿಂಬ ಅದರಲಿ, ಆದರೆ ಗೋಚರಿಸುತ್ತಿದೆಯಲ್ಲಾ ಪತಿ ರೂಪ ಎನ್ನಲಿ,
ಪ್ರತಿ ಬಿಂಬಿಸಿದೆ ಪತಿ ರೂಪ ಆಕಾಶದೆತ್ತರಕೆ ಆದರೂ ತಿಳಿಯದವರು ನಾನವರ ಕನ್ನಡಿ. ಅವರೊಡನೆ ಸೇರಿ ಮೂಡಿಸಿದೆ ಸುಖ ದುಃಖದ ಛಾಯೆ, ಆದರೆ ತಿಳಿಯರವರು ಎನ್ನ ಮನದ ಸ್ಥಿರ ಛಾಯೆ . ದುಃಖದ ಕಂಬನಿ ಕುಗ್ಗಿಸಿತ್ತೆನ್ನ ಕನ್ನಡಿ, ಅದುಮಿಟ್ಟ ಭಾವನೆಗಳು ಮೂಡಿಸಿದೆನ್ನಲಿ ಬಿರುಕು, ಒಡೆದು ಚೂರಾಗಬೇಕೆಂದರು ಬಿಡುತ್ತಿಲ್ಲ ಎನ್ನ ಮನಸ್ಸು ಏಕೆಂದರೆ ,ಕಾಡುತಿಹುದೆನ್ನ ಕೂಸು ಪ್ರತಿಬಿಂಬದಲಿ . ಕಾಣುತ್ತಿರುವೆ ನಾ ಅದರ ಭವಿಷ್ಯದ ಪ್ರತಿ ಛಾಯೆ,
ಆದರೂ ಕಿವುಡರಂತಿದ್ದರೂ ನನ್ನ ಕೂಗಿಗೆ ನೋವುಂಡು ಭಾವನೆಯ ಬಿರುಕುಗಳ ಸಹಿಸಿ ಸದಾ ನಾನಾಗಿರುವೆ ಸಂಸಾರದ ಕನ್ನಡಿ
ಭಾವ ( ಆಲ್ವಿನ್ ಪವನ್. ಜಿ)